ipad/iphonetopBanner

ಕಥೆಗಳು

ವಿಘ್ನೀಶ್ವರ - 21

ಲೇಖಕ: ಚಂದಮಾಮ | 22nd Nov, 2011




ಮಾರಣವಾದ ಆ ಹೋಮಾಗ್ನಿ ಯಿಂದ ಹುಟ್ಟಿದ ಭಯಂಕರವಾದ ಪಾ್ರಣಿಯು ಅದೃಶ್ಯ ವಾದ ಮರುಕ್ಷಣ ದಲ್ಲೇ ಕಾಲನು ವಿಘಾ್ನಸುರ ರೂಪ ವನ್ನು ತಳೆದು ಕಾಲಪಾಶವನ್ನು ಬೀಸಿದನು. ಅಭಿನಂದನನು ತನ್ನ ಪರಾಕ್ರಮವನ್ನು ತೋರಿಸಿ ಅದನ್ನು ಛೇದಿಸಲಿಕೇ್ಕ ಪ್ರಯತ್ನಿಸುತ್ತ ನೆಲಹಿಡಿದು ಬಿದ್ದನು. ಕಾಲಪಾಶವು ಇನ್ನಷ್ಟು ವಿಜೃಂಭಿಸುತ್ತ ಜೀವಕೋಟಿಗಳನ್ನು ಅಂತ್ಯಗೊಳಿಸಲು ಹೊರ ಟುದನ್ನು ನೋಡಿ ವಸಿಷ್ಠನೇ ಮೊದಲಾದ ಸಪ್ತಮಹರ್ಷಿಗಳೂ, ಇತರ ಋಷಿಗಳೂ, ಬ್ರಹ್ಮ ದೇವನನ್ನು ಪಾ್ರರ್ಥಿಸತೊಡಗಿದರು.

ಆಗ ಬ್ರಹ್ಮನು ಅವರನ್ನು ನೋಡಿ ಕಾಲ ಪಾಶ ವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಕಾಲ ಪ್ರಭಾವವನ್ನು ತಡೆದು ನಿಲ್ಲಿಸಿ ಕಾಲನನ್ನು ನಿಗ್ರಹಿಸಬಲ್ಲವನು ಗಣೇಶನೊಬ್ಬ ನೇ! ಎಂದು ಹೇಳಿ, ಅವರೊಂದಿಗೇ ತಾನೂ ಗಣೇಶ್ವರನನ್ನು ಪಾ್ರರ್ಥಿಸಿದನು. ನೋಡುತ್ತಿದ್ದಹಾಗೇ ಮಹಾ ಗಣಪತಿಯು ಸ್ವಸ್ತಿಕಾ ಪೀಠದ ಮೇಲೆ ಸಾಕ್ಷಾತಾ್ಕರ ಗೊಂಡನು. ಗಣೇಶನು ತನ್ನ  ಕೈಯಲ್ಲಿರುವ ಪಾಶವನ್ನು ಕಾಲಪಾಶದ ಕಡೆಗೇ ಬಿಟ್ಟನು ಅದು ಕಾಲಪಾಶ ವನ್ನು ಎಳೆದು ಗಣಾಧಿಪತಿಯ ಮುಂದೆ ಕೇಡವಿತು.

ಈ ಪರಾಭವವನ್ನು ನೋಡಿ ಕಾಲನು ಕೋಪ ದಿಂದುರಿಯುತ್ತ ಇನ್ನಿಷ್ಟು ಭೀಕರವಾದ ವಿಘಾ್ನಸುರ ರೂಪವನ್ನು ತಾಳಿ ಬಂದನು. ಗಣೇಶನು ಅಂಕುಶ ವನ್ನು ಪ್ರಯೋಗಿಸಲು, ಅದು ವಿಘಾ್ನಸುರನ ಬೆನ್ನೆಲುಬಿನಲ್ಲಿ ಚುಚ್ಚಿಕೊಂಡಿತು. ಅಂಕುಶದ ಮಹಾ ಬಾಧೆಯಿಂದ ವಿಘಾ್ನಸುರನು ತತ್ತರಿಸಿ ದನು. ಕೊನೆಗೇ ಗಜಮುಖನನ್ನೇ ಗತಿಯೆಂದು ಅವನ ಎರಡು ಪಾದಗಳ ನಡುವೆ ಬಿದ್ದು ಬಿಟ್ಟನು. ಗಜ ಮುಖನು ವಿಘಾ್ನಸುರನನ್ನು ಎರಡು ಪಾದಗ ಳಿಂದಲೂ ಗಟ್ಟಿಯಾಗಿ ಮೆಟ್ಟಿದನು.

ಆಗ ವಿಘಾ್ನಸುರ ರೂಪದೊಳಗಿನಿಂದ ಕಾಲನು ಹೊರಬಿದ್ದು, ಗಣೇಶನ ಮುಂದೆ ಕೈ ಜೋಡಿಸಿ ವಂದಿಸುತಾ್ತ ಗಣೇಶಾ, ನಿನ್ನ ಮಹಾ ವಿಶ್ವಪಾಶದ ಮುಂದೆ ನನ್ನ ಕಾಲಪಾಶವು ಎಷ್ಟರ ಮಟ್ಟಿನದು! ವಿಶ್ವವನ್ನೇ ವಶೀಕರಿಸಿಕೊಳ್ಳುವ ನಿನ್ನ ಅಂಕುಶದ ಮುಂದೆ ನನ್ನ ಕಾಲದಂಡವು ಎಷ್ಟು ಮಾತ್ರ? ನೀನು ವಿಘಾ್ನಸುರನನ್ನು ಅಧೀನದಲ್ಲಿಟ್ಟು ಕೊಂಡ ವಿಘ್ನೀಶ್ವರನೇ ನಿಜ. ದೇವಾ! ನನ್ನ ಅತಿಕ್ರಮಗಳನ್ನು ಕ್ಷಮಿಸು!’’ ಎಂದು ಬೇಡಿ ಕೊಂಡನು.


ಸಂಬಂಧಿತ ಕಥೆಗಳು

BannerBanner